Posts

Showing posts from May, 2023

ದಲಿತ ಮಠಗಳು : ಬೇಕೆ ? ಸುರೇಶ್ ಮಹರ್ಷಿ

Image
ವಾಲ್ಮೀಕಿ ಮಹರ್ಷಿಗಳೇ ಆಗಲಿ ಶೂದ್ರರಾಗಿದ್ದ ದ್ವೈಪಾಯನರೇ ಆಗಲಿ ಸಮಾಜವಿರೋಧಿಯಾಗಿ ಕಾವ್ಯ ರಚಿಸಲು ಸಾಧ್ಯವಾಗದು.ಸಮಾಜದ ಅಧಿಕೃತ ಮುದ್ರೆ ನಂತರವೇ ಸರಕಾರದ ಅನುಮತಿ ಪಡೆದು ಪ್ರಕಟಿಸಿದರು.ಶ್ರೀರಾಮ ಅನುಮತಿ ಮತ್ತು ಧರ್ಮರಾಯ ಅನುಮತಿ ಪಡೆಯಲಾಗಿತ್ತು. ಇದೀಗ ದಲಿತ ಮತ್ತು ಧರ್ಮ ಗಳ ಬಗ್ಗೆ ಸಮಾಜದ ಅನುಮತಿ ಪಡೆಯುವಲ್ಲಿ ವಿಫಲರಾದರು. ಸರಕಾರದ ಅನುಮತಿ ಮೊದಲು ದೊರಕಿಬಿಟ್ಟಿತು.  ಸಹನೀಯವಾದ ಬದುಕನ್ನು ಪಡೆಯಲು ಹಕ್ಕಿದೆ.ಗೌರವ ಬೇಕು.ಸಂತೃಪ್ತಿಗಳು ಬೇಕು.ಮಾತಿಗೆ ಒಂಚೂರಾದರೂ ಬೆಲೆ ಬೇಕು.ಅಸ್ಪೃಶ್ಯತೆ ಹಿಂದಿನ ಆಸ್ತಿ ಅವಕಾಶಗಳ ರಕ್ಷಣೆಗಳ ನಿಗೂಢವನ್ನು ಭೇಧಿಸಬೇಕಿದೆ.ಆದರೆ ಯಾರ ರಕ್ತವನ್ನೂ ನೆಲಕ್ಕೆ ಬೀಳಿಸಬಾರದು.ಬಿದ್ದರೇ ಭೂಮಿ ತಾಯಿಯ ಆರ್ತನಾದವೇನಾದರೂ ಉಂಟಾದರೆ ದೇವಲೋಕ ಸುಮ್ಮನಿರುವುದೇ ?!💕 ಸುರೇಶ್ ಮಹರ್ಷಿ 

ಮಠಗಳು ಮತ್ತು ದೇವಸ್ಥಾನಗಳು

Image
ಇಂಗ್ಲಿಷ್ ಸರಕಾರವು ಗುರುತಿಸದೇ ಇದ್ದ ಬಹುಮುಖ್ಯ ಸಂಸ್ಥೆ " ಈ ಮಠಗಳು". ಮಠಗಳು ವೇದಗಳ ಮುಂದುವರಿದ ಭಾಗಗಳಲ್ಲ. ವೇದದ ಮುಂದುವರಿದ ಭಾಗಗಳು ವಿದ್ಯಾಕೇಂದ್ರಗಳಾಗಿದ್ದು ಋಷಿಗಳ ಆಶ್ರಮಗಳಾದವು.ಋಷಿಗಳು ಮಕ್ಕಳ ಯೋಗಕ್ಷೇಮಕ್ಕಾಗಿ ಸಂಸಾರಿಗಳಾಗಿದ್ದು ಕೃಷಿಯನ್ನೂ ಗೋಸಾಕಣೆಯನ್ನೂ ಕುದುರೆ ಆನೆಗಳನ್ನಲ್ಲ!ಮಾಡುತ್ತಿದ್ದರು. ಮಠದ ಮೂಲ ಜೈನಧರ್ಮ.ಅಲ್ಲಿ ವೈರಾಗ್ಯಕ್ಕೆ ಪ್ರಥಮಸ್ಥಾನವಿದ್ದು ಅರಸನು ಕಪ್ಪಕಾಣಿಕೆ ಸಲ್ಲಿಸುವ ಸನ್ನಿಧಾನ. ಸಾರ್ವಜನಿಕ ಊಟದ ಛತ್ರ, ವೃದ್ಧರ ತಪಸ್ಸಿನ ಮತ್ತು ಆರೋಗ್ಯ ವಿಚಾರಣಾ ಸ್ಥಳವೂ ಸಹ.ಶ್ರವಣಬೆಳಗೊಳ -ಬಿಂದುಸಾರ-ಇತ್ಯಾದಿ.ರಾಜರನ್ನೂ ಯುದ್ಧ ಮುಗಿಸಿಬಂದಿದ್ದರೂ ಶಾಂತಿ ವಿಶ್ರಾಂತಿ ಗಳ ಸಮನ್ವಯ ಕೇಂದ್ರ. ನಿವೃತ್ತಿಯ ಕಲ್ಪನೆಯ ಅರಿವಿರದಿದ್ದ ಬ್ರಿಟಿಷ್ ಆಡಳಿತ ಈ ಮಠಗಳ ಸೂಕ್ಷ್ಮತೆಗೆ ಯಾವ ಕಾನೂನನ್ನು ಮಾಡಲಿಲ್ಲ.ಹಾಗಾಗಿ ಸಂವಿಧಾನದಲ್ಲೂ ಉಲ್ಲೇಖಿಸಲಾಗುತ್ತಿಲ್ಲ.ಮಠ ನೆಡಸುವವರಿಗೆ ಆ ಕಷ್ಟಗಳ ಅರಿವಿದೆ.ಸನಾತನ ಧರ್ಮದ ಅಥವಾ ಹಿಂದೂ ದೇಶದ ಧರ್ಮಗಳ ಉಳಿವು ಮಠಗಳ ಅಸ್ತಿತ್ವದಲ್ಲಡಗಿದೆ.ಮತ್ತು ಎಲ್ಲಾ ನೇರ ಸರಕಾರೀ ಆಡಳಿತಕ್ಕೆ ಹೊಂದಿಕೊಂಡಿದೆ.ಹೇಗೆ ಚರ್ಚ್ ಮತ್ತು ಮಸಿದಿಗಳು ಮಾನವ ಸಮಾಜದ ಮೈಲಿಗಲ್ಲುಗಳಾದವೋ ಹಾಗೆ.✍️ Common Man &Woman ಪರವಾಗಿ Suresh & Maharshi!💕